`ನೆಲ್ಸನ್` ಆಗಿ ಬಂದ ಮರಿ ಟೈಗರ್…ಸಖತ್ ಮಾಸ್ ಆಗಿದೆ ಟೀಸರ್..ಚೊಚ್ಚಲ ಹೆಜ್ಜೆಯಲ್ಲಿಯೇ ಭರವಸೆ ಹೆಚ್ಚಿಸಿದ ಗೊಂಬೆಗಳ ಲವ್ ಹೀರೋ ಅರುಣ್ ಕುಮಾರ್
Posted date: 27 Fri, Oct 2023 01:41:24 PM
ಗೊಂಬೆಗಳ ಲವ್‌ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ನಟ ಅರುಣ್‌ ಕುಮಾರ್ ಈಗ ನಿರ್ದೇಶನಕ್ಕಿಳಿದಿದ್ದಾರೆ. ಅವರ ಚೊಚ್ಚಲ ಹೆಜ್ಜೆಗೆ `ನೆಲ್ಸನ್` ಎಂಬ ಶೀರ್ಷಿಕೆ ಇಡಲಾಗಿದ್ದು, ರಕ್ತದಲ್ಲಿ ನೆಂದ ದೇವರಕಾಡು ಎಂಬ ಅಡಿ ಬರಹ ಚಿತ್ರದ ಸಾರಂಶವನ್ನು ವಿವರಿಸ್ತಿದೆ. ಇಂದು ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಟೀಸರ್ ರಿಲೀಸ್ ಆಗಿದ್ದು, ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಸಖತ್ ಮಾಸ್ ಆಗಿ ಮೂಡಿಬಂದಿರುವ ನೆಲ್ಸನ್ ಟೀಸರ್ ನಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ಆಂಗ್ರಿ ಯಂಗ್ ಮ್ಯಾನ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಇಂದು ಎಂಎಂ ಲೆಗಸಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಟೀಸರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು. 
 
ಉಪೇಂದ್ರ ಮಾತನಾಡಿ, ಟೈಗರ್ ಹವಾ ಆಗಲೂ ಇತ್ತು ಈಗಲೂ ಇರುತ್ತೇ.. ಮುಂದೆಯೂ ಇರುತ್ತದೆ. ನಿಮ್ಮ ತಂದೆ ಸಿನಿಮಾಗೆ ಡೈಲಾಗ್ ಬರೆದಿದ್ದೆ. ಇವತ್ತು ನಿಮ್ಮ ಟೀಸರ್ ಲಾಂಚ್ ಮಾಡಲು ನಿಮ್ಮ ತಂದೆ ಆಶೀರ್ವಾದ ಮಾಡಿದ್ದಾರೆ. ಟೀಸರ್ ಬಗ್ಗೆ ಏನೂ ಹೇಳೋದು. ಎಲ್ಲವೂ ಎಕ್ಸ್ಟ್ರಾಡಿನರಿಯಾಗಿದೆ. ಮೇಕಿಂಗ್, ಗೆಟಪ್ ಸೂಪರ್. ಸಬ್ಜೆಕ್ಟ್ ಬೇರೆ ತರ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ.  ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಲಿದೆ ಎಂದರು.

ನಟ ವಿನೋದ್ ಪ್ರಭಾಕರ್ ಮಾತನಾಡಿ, ಉಪೇಂದ್ರ ಅಣ್ಣ ಟೀಸರ್ ನೋಡಿ ತುಂಬಾ ಖುಷಿಪಟ್ಟರು. ದರ್ಶನ್ ಸರ್ ಕೂಡ ಟೀಸರ್ ನೋಡಿದರು. ಈ ತರಹದ ಒಂದು ಸಿನಿಮಾ ಮಾಡಲು ಧೈರ್ಯ ಬೇಕು. ಶ್ರೀರಾಮ್ ಸರ್ ನಿಮಗೆ ಧನ್ಯವಾದ. ನಿಮ್ಮ ಮೇಲೆ ನಮಗೆ ಕಾನ್ಫಿಡೆನ್ಸ್ ಇದೆ. ಅರುಣ್ ಕುಮಾರ್ ಅವರು ಬಹಳಷ್ಟು ಫ್ಯಾಷನ್ ಇರುವ ವ್ಯಕ್ತಿ. ಭರತ್ ಸರ್ ವಂಡರ್ ಫುಲ್ ಮ್ಯೂಸಿಕ್. ಸಿನಿಮಾ ಬಗ್ಗೆ ಮುಂದೆ ಮಾತಾಡ್ತೀನಿ. ತೆರೆಹಿಂದೆ ಬಹಳಷ್ಟು ಜನ ಕೆಲಸ‌ ಮಾಡಿದ್ದೀರಿ ಎಂದರು.

ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, ಲಾಕ್ ಡೌನ್ ಆದ್ಮೇಲೆ ಹಸಿವು, ಅಸಹಾಯಕ ಸಮಯದಲ್ಲಿ ನೆಲ್ಸನ್ ಹುಟ್ಟಿಕೊಂಡಿದ್ದು. ಬರೆಯುತ್ತಾ, ಬರೆಯುತ್ತಾ ತುಂಬಾ ಚೆನ್ನಾಗಿ ಕಥೆ ಬೆಳೆಯಿತು. ಮಲಯಾಳಂ, ತಮಿಳು ಇಂಡಸ್ಟ್ರೀಗೆ ಕಥೆ ತೆಗೆದುಕೊಂಡು. ಆದರೆ ನನಗೆ ತೃಪ್ತಿಯಾಗಲಿಲ್ಲ. ಇಲ್ಲೇ ಏನಾದರೂ ಆಗಬೇಕು ಅದಕ್ಕೆ ಬಂದೆ. ಸ್ನೇಹಿತರ ಮೂಲಕ ನಿರ್ಮಾಪಕರು ಸಿಕ್ಕಿದರು. ನಂಬಿಕೆ ಹುಟ್ಟಿಕೊಳ್ತು. ಇದುವರೆಗೆ ನನ್ನ ನಂಬಿದ್ದು ಶ್ರೀರಾಮ್ ಸರ್. ನಾನು ಟೀಂ ನನ್ನ ಬೆನ್ನೆಲುಬು ಆಗಿ ನಿಂತರು. ಸಿನಿಮಾ ಈ ಹಂತಕ್ಕೆ ಬರಲು ನನ್ನ ಟೆಕ್ನಿಕಲ್ ಟೀಂ ಬೆಂಬಲವಿದೆ. ವಿನೋದ್ ಸರ್ ಡೆಡಿಕೇಷನ್ ನೋಡಿ ಭಯ ಆಯಿತು. ವಿನೋದ್ ಸರ್ ಸಪೋರ್ಟ್ ತುಂಬಾ ದೊಡ್ಡದಿದೆ. 60 ರಿಂದ 90 ಒಳಗಡೆ ಚಾಮರಾಜನಗರದಲ್ಲಿ ನಡೆಯುವ ಕಥೆ ಇದು. ಸ್ಕ್ರೀನ್ ಪ್ಲೇ, ಕಥೆ ತುಂಬಾ ಸ್ಟ್ರಾಂಗ್ ಆಗಿದೆ ಎಂದರು.

ನಿರ್ಮಾಪಕ ಬಿ.ಎಂ.ಶ್ರೀರಾಮ್ (ಕೋಲಾರ) ಮಾತನಾಡಿ, ಉಪ್ಪಿ ಕಾರ್ಯಕ್ರಮಕ್ಕೆ ಬಂದಿದ್ದು ಬಹಳ ಖುಷಿ ಆಯ್ತು. ನಾವು ತುಂಬ ಬಡತನದಿಂದ ಮೇಲೆ ಬಂದವರು. ನಾವು ಈ ಮಟ್ಟದಲ್ಲಿ ಬೆಳೆಯಲು ಐದು ಜನರನ್ನು ಸ್ಫೂರ್ತಿಯಾಗಿ ತೆಗೆದುಕೊಂಡೆ. ಅದರಲ್ಲಿ ಉಪ್ಪಿ ಸರ್ ಕೂಡ ಒಬ್ಬರು. ತಂದೆ ತಾಯಿ ಆಶೀರ್ವಾದ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಇದ್ದೀವಿ. ಅರುಣ್ ಅವರನ್ನು ನನ್ನ ಸ್ನೇಹಿತರು ರೆಫರ್ ಮಾಡಿದ್ದರು. ಇದು ಚಾಮರಾಜನಗ ಆಚಾರ,ವಿಚಾರ ಅಂಶಗಳು ಇರುವುದರಿಂದ ಕಥೆ ಒಪ್ಪಿಕೊಂಡೆ. ವಿನೋದ್ ಸರ್ ಅಪ್ರೋಚ್ ಮಾಡಿದ್ವಿ. ಕಥೆ ಹೇಳಿದ್ವಿ ಒಪ್ಪಿಕೊಂಡರು. ಟೀಸರ್ ಮಾಡಿದ್ಮೇಲೆ ಅರುಣ್ ಟೀ ಮೇಲೆ ಭರವಸೆ ಹೆಚ್ಚಾಯ್ತು ಎಂದರು.
 
ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ನೈಜ ಘಟನೆಯ ಕಥಾಹಂದರದ ಸಿನಿಮಾ. ಚಾಮರಾಜನಗರ ಜಿಲ್ಲೆಯಲ್ಲಿ 60ರಿಂದ 90ರ ದಶಕದಲ್ಲಿ ನಡೆಯುವ ಗ್ಯಾಗ್‌ಸ್ಟರ್‌ ಕಥೆ. ಅಲ್ಲಿನ ಭಾಷೆ, ಸಂಸ್ಕೃತಿ, ನೆಲ, ಜಲ, ಬುಡಕಟ್ಟು ಜನಾಂಗದ ಸಂಘರ್ಷ ಸೇರಿದಂತೆ ಒಂದಷ್ಟು ಅಂಶಗಳನ್ನು ಈ ಚಿತ್ರದಲ್ಲಿ ಅರುಣ್ ಕಟ್ಟಿಕೊಡಲಿದ್ದಾರೆ. ವಿಶೇಷ ಅಂದರೆ ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ  ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾದಲ್ಲಿ ನಿಮಗೆ ಕಾಣಸಿಗ್ತಾರೆ. ಬಹಳ ಇಂಪ್ರೆಸ್ ಎನಿಸುವ ಟೀಸರ್ ಝಲಕ್ ನಲ್ಲಿ ಛಾಯಾಗ್ರಹಣ ಹಾಗೂ ಸಂಗೀತವೂ ಗಮನಸೆಳೆಯುತ್ತಿದೆ. 

ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಅರುಣ್ ಕುಮಾರ್ ಆ ಎಲ್ಲಾ ಕಲೆಯನ್ನು ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಚಿತ್ರಕ್ಕೆ ಧಾರೆ ಎರೆದಿದ್ದಾರೆ. ಅವರ ಮೊದಲ ಕನಸಿಗೆ ದೀಪ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಿ.ಎಮ್ ಶ್ರೀರಾಮ್ (ಕೋಲಾರ) ಹಣ ಹಾಕಿದ್ದಾರೆ. ಪ್ರಜ್ವಲ್ ಗೌಡ ಛಾಯಾಗ್ರಹಣ ಮತ್ತು ಭರತ್ ಬಿಜಿ ಸಂಗೀತ, ವಿಜಯ್ ರಾಜ್ ಸಂಕಲನ, ಹರಿ ಸಂಭಾಷಣೆ `ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು` ಸಿನಿಮಾಗಿದೆ. ಆಕ್ಷನ್ ಟೀಸರ್ ಧಮಾಕ ಎಬ್ಬಿಸಿರುವ ಚಿತ್ರತಂಡ ನವೆಂಬರ್ ತಿಂಗಳಿಂದ ಶೂಟಿಂಗ್ ಅಖಾಡಕ್ಕೆ ಧುಮುಕಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed